Friday 10 August 2012

ಅಪ್ರಯೋಜಕ ಸುಳ್ಳುಗಳಿಂದ ಹೆಚ್ನಿನ ಸರತಿ !!!!!

ಅಪ್ರಯೋಜಕ ಸುಳ್ಳುಗಳಿಂದ ಹೆಚ್ನಿನ ಸರತಿ ಇಲ್ಲದ ತೊಂದರೆಗಳೇ ಜಾಸ್ತಿ. ಹಾಗೆ ನೋಡಿದರೆ ಸುಳ್ಳನ್ನ ಹೇಳದೇ ಇರೋದು ತುಂಬಾ ಒಳ್ಳೆಯದು. ಆದರೂ ಯಾಕೆ ಸುಮ್‍ಸುಮ್‍ನೆ ಇಲ್ಲದ ಸುಳ್ಳು ಹೇಳ್ತೀವೋ ನನಗಂತೂ ಗೊತ್ತಾಗಿಲ್ಲ. ಆದರೆ ಆಮೇಲೆ ಇಲ್ಲದ ಪೀಕಲಾಟಕ್ಕೆ ಸಿಕ್ಕೋತೀವಿ. ಈ ಮನಸ್ಸಂಬೋದೆ ಹೀಗೆ, ಹುಚ್ಚುಚ್ಚಾಗಿ ವರ್ತಿಸುತ್ತೆ, ಒಮ್ಮೆ ಉದಾತ್ತವಾಗಿ ಇನ್ನೊಮ್ಮೆ ತಿಕ್ಕ್‍ತಿಕ್ಕಲಾಗಿ. ಆದ್ರೆ ಒಂದಂತೂ ನಿಜ, ಸುಳ್ಳು ಹೇಳ್ತಾ ಹೇಳ್ತಾ ಅದೊಂದು ಚಟವಾಗಿ ಬಿಡುತ್ತೆ. ಹಾಗಾಗಿ ಸುಳ್ಳನ್ನು ಆದಷ್ಟು ನಿಗ್ರಹಿಸಬೇಕು. ಸುಳ್ಳು ಹೇಳೊದನ್ನು ಒಮ್ಮೆಲೇ ಪೂರ್ತಿ ನಿಲ್ಲಿಸ್ತೀನಿ ಅಂದ್ರೆ ಅದು ಮತ್ತೊಂದು ದೊಡ್ಡ ಸುಳ್ಳಾಗುತ್ತದೆ, ಮನಸ್ಸನ್ನು ನಿಗ್ರಹಿಸುತ್ತಾ ಹೊದ್ರೆ ಒಂದು ದಿನ ಸುಳ್ಳು ಸಂಪೂರ್ಣ ನಿಂತೇ ಹೊಗುತ್ತದೆ. ಹಾಗ್ ನೋಡಿದ್ರೆ ಇಲ್ಲದ nuisance create ಆಗೋದು ಮುಖ್ಯವಾಗಿ ಸುಳ್ಳಿನಿಂದಲೇ.

No comments:

Post a Comment