Saturday, 8 September 2012

ಮನದ ಮುಗಿಲ...

ಮನದ ಮುಗಿಲ ಮುಟ್ಟಿದ ತಂಗಾಳಿ
ಇಂದೇಕೋ ಬೀಸಿದೆ ನನ್ನೆದೆಯಲ್ಲಿ ಬಿರುಗಾಳಿ
ಕೈಗೆ ಎಟುಕದ ಸಿಹಿಗಾಳಿ,ತೂರಿದೆ ನನ್ನೆದೆಯಲಿ ಚಳಿಯಾಗಿ
ಇದು ಪ್ರೀತಿನಾ...! ಪ್ರೀತಿನಾ...!

ಗೆಳತಿಯ ಬರುವಿಕೆಗಾಗಿ ಕಾದ ಆ ಗಳಿಗೆ
ಬಂದಾಕ್ಷಣ ಕಣ್ತುಂಬಿ ಸಂತೈಸುವಳೆಂಬ ಬಯಕೆ
ನನ್ನ ಕಾಡಿ ಕಾಡಿ ಒರಗಿಸಿದೆ ಅವಳೆದೆಗೆ
ಇದು ಪ್ರೀತಿನಾ...! ಪ್ರೀತಿನಾ...!

ನೋವಲ್ಲೂ ನೋವು ಕೊಡುವ..

ನೋವಲ್ಲೂ ನೋವು ಕೊಡುವ
ನೋವೆಂದರೆ ಅರ್ಥೈಸುವ
ಈ ಪ್ರೀತಿಯ ಹೃದಯ,
ಸತ್ತರೂ ಬದುಕಿದ್ದಂತೆ ನಗು-ನಗುತ್ತಲೇ
ನೋವನುಭವಿಸುವ ಈ ಹುಡುಗರು

ನಗುತ್ತಿದ್ದಾಗ ನೋವುಣಿಸುವ,
ಪ್ರೀತಿ ಅಂತ ಎದೆ ತಟ್ಟಿ ಕಣ್ಣೀರಿಡುವ
ಈ ಪ್ರೀತಿಯ ಗೆಳತಿ,
ಬದುಕಿದ್ದಾಗಲೂ ನಗು-ನಗುತ್ತಲೇ ಸಾಯಿಸಿ
ಆನಂದಿಸುವ ಈ ಹುಡುಗಿಯರು

ನೀ ನನಗೆ ಸ್ವಂತ,
ನಾ ನಿನ್ನ್ನೊಬ್ಬನಿಗೆ ಸ್ವಂತ ಎಂದು ಚೀರುವ
ಈ ಪ್ರಿಯತಮೆಯ ಮನಸ್ಸು,
ಪ್ರೀತಿಯ ಉಸಿರು ಇದ್ದಾಗಲೇ, ಹೃದಯ ಹೊಡೆದು, ಬೇರೆಡೆಗೆ ಮನಜಾರಿ
ಕ್ಷಣ ಮಾತ್ರದಲಿ ಮರೆಯುವ ಈ ಪ್ರಿಯತಮೆಯರು

ನೀ ಕೊಟ್ಟಿದ್ದು ನೋವೋ! ನಲಿವೋ!
ಇಂದಿಗೂ, ಎಂದೆಂದಿಗೂ ನಾ ನಿನ್ನ ಪ್ರೀತಿಸುವೆ,
ಸಿಹಿ ಕಹಿಗಳ ಮಿಲನವೇ ಈ ಜೀವನ ಎಂಬಂತೆ
ನಿನ್ನ ಪ್ರೀತಿಯ ಸಿಹಿಯಲಿ ತೇಲಾಡಿ, ಇಂದು ಕ

ಅತ್ತಿಂದಿತ್ತ ಸಂಚರಿಸುತಿರಲು ಬೆಳ್ಳಿ ಮೋಡಗಳು

ಅತ್ತಿಂದಿತ್ತ ಸಂಚರಿಸುತಿರಲು ಬೆಳ್ಳಿ ಮೋಡಗಳು
ತಂಗಾಳಿ ನಿನಗೇಕೆ ಚಂದಿರನ ಕಾವಲು
ಎಲ್ಲಿರುವಳೋ ನನ್ನಾಕೆಯ ನಾ ಹುಡುಕಲು
ಬೇಕಾಗಿದೆ ಹಾಲ್ಗೆನ್ನೆಯ ಬೆಳದಿಂಗಳು.....

ಕಳೆಯಲು ಬಯಸುತಿದೆ ಮನಸ್ಸು ನಿನ್ನ ಜೊತೆ

ಕಳೆಯಲು ಬಯಸುತಿದೆ ಮನಸ್ಸು ನಿನ್ನ ಜೊತೆ
ಒಂದು ದಿವ್ಯ ಸಂಜೆ

ಆಕಾಶವು ತಿಳಿಯಾದಾಗ,
ಸಮುದ್ರ ಶಾಂತವಾದಾಗ 
ಕನಸಿಗೆ ಚುಂಬಿಸಿದ ಪ್ರೀತಿಯ ಸಂಜೆ 

ಮನಸಿನ ಮಾತು ಕೇಳದಾದಾಗ,
ಹೃದಯದ ಬಡಿತ ಜೋರಾದಾಗ 
ತಂಗಾಳಿಯ ತೋಳಲಿ ಅಡಗಿದ ಸಂಜೆ 

ನಿನ್ನೆದೆ ನೋವಿಗೆ ಸ್ಪಂಧಿಸಿದಾಗ,
ಈ ಮನಸಿನ ಕದವ ನೀ ತೆರೆದಾಗ 
ಬೆಚ್ಚಗೆ ಇಡುವ ಮುತ್ತಿನ ಸಂಜೆ 

ಕಣ್ಣೀರಲಿ ನಗುವ ನೀನಿಟ್ಟಾಗ,
ಮೌನವೇ ಮಾತು ಕಲಿತಾಗ 
ಹರಳಿದ ಹೂವಿನ ಅದ್ಭುತ ಸಂ

Thursday, 6 September 2012

ಕಾರಣ ಯಾರು?

 
ಮನಸು ಕಂಡ ಕನಸು ನೂರು
ಕಲ್ಪನೆಗೆ ಹೊಣೆ ಯಾರು?
ಹೃದಯದ ಮಾತುಗಳು ನೂರು
ಭಾವನೆಗಳಿಗೆ ಹೊಣೆ ಯಾರು?
ಕಣ್ಣೀರಿನ ಕತೆಗಳು ನೂರು
ನೋವಿಗೆ ಹೊಣೆ ಯಾರು?
ಮೌನಕೆ ಕಾರಣ ನೂರು
ಅಶಾಂತಿಗೆ ಕಾರಣ ಯಾರು?
ಮಧುರ ಕ್ಷಣಗಳು ನೂರು
ನೆನಪಿಗೆ ಕಾರಣ ಯಾರು?
ಯೌವ್ವನಕೆ ರೆಕ್ಕೆಗಳು ನೂರು
ಹಾರಾಟಕೆ ಕಾರಣ ಯಾರು?
ಒಲವಿನ ಓಲೆ ನೂರು
ಪಿಸುಮಾತಿಗೆ ಕಾರಣ ಯಾರು?
ಆಸೆಯ ತವಕ ನೂರು
ನಿರಾಸೆಗೆ ಕಾರಣ ಯಾರು?
ಪ್ರೀತಿಗೆ ಹುಟ್ಟು ನೂರು
ಸೃಷ್ಟಿಗೆ ಕಾರಣ ಯಾರು?
*********

ಜಿಂಕೆ ಮರೀನ Jinkemari

ಜಿಂಕೆ ಮರೀನ ನೀ ಜಿಂಕೆಮರೀನ ,
ನೀ ಜಿಂಕೆ ಮರೀನ ನೀ ಜಿಂಕೆ ಜಿಂಕೆ ಮರೀನ ಹೇಯ್ ಮುದ್ದು ಮಲ್ಲೆ
ಹೇಯ್ ನೀ ಮುದ್ದು ಮುದ್ದು ಜಲ್ಲೆ
ಭೂಮಿ ಮೇಲೆ ನಾನಿಲ್ಲ ಮನಸು ಕೈಗೆ ಸಿಕ್ತಿಲ್ಲ
ನೋಡ್ತಾಳವಳು ನನ್ನ ಕಾಡ್ತಾಳವಳು ,
ಜಿಂಕೆ ಮರೀನ ನೀ ಜಿಂಕೆಮರೀನ , ನೀ ಜಿಂಕೆಮರಿನ ನೀ ಜಿಂಕೆ ಜಿಂಕೆ ಮರೀನ . ಕದ್ದು ಕದ್ದು ನೋಡಿ ನೀನು ನಿದ್ದೆ ಇಲ್ಲದಂಗೆ ಮಾಡಿದ್ದೇನು ,
ಏನೇನು ಮಾಡ್ಬಿಟ್ಟೆ ನೀನು ,
ಯಾಕೋ ಕುಂತಲ್ಲಿ ಕೂರಂಗಿಲ್ಲ ,
ನಿಂತಲ್ಲಿ ನಿಲಂಗಿಲ್ಲ ,
ಯಾವತ್ತು ಹಿಂಗೆ ಆಗಿಲ್ಲ ,
ಇದು ಯಾಕೆಂತ ಹೇಳೋರಾರಿಲ್ಲ

ಜಿಂಕೆಮರೀನ ನೀ ಜಿಂಕೆಮರೀನ ನೀ ಜಿಂಕೆ ಮರೀನ ನೀ ಜಿಂಕೆ ಜಿಂಕೆಮರೀನ
ಮೋಡಿ ಮಾಡೋ ಮಲ್ಲಿ ನಿನಗೆ ಹೃದಯ ಬಿಟ್ಟು ಕೊಟ್ಟೆ
ಭೂಮಿ ಮೇಲೆ ನಾನಿಲ್ಲ
ಮನಸು ಕೈಗೆ ಸಿಕ್ತಿಲ್ಲ
ನೋಡ್ತಾಳವಳು ನನ್ನೇ ಕಾಡ್ತಾಳವಳು
ಹೇಯ್ ಮುದ್ದು ಮಲ್ಲೆ
ಹೇಯ್ ನೀ ಮುದ್ದು ಮುದ್ದು ಜಲ್ಲೆ
ಹೃದಯ ಕದ್ಲು ಮುದ್ದು ಮಲ್ಲೆ
ಹೇಯ್ ನೀ ಮುದ್ದು ಮುದ್ದು ಜಲ್ಲೆ
ಹುಟ್ದಾಗ್ಲಿಂದ ಇಲ್ಲೀಗಂಟ ಹುಡುಗೀರ್ ತಂಟೆಗ್ ಹೊದೋನಲ್ಲ

ಬೇಲೀನ್ ಹಾಕಿ ಬಂದಿಸಿಟ್ಳಲ್ಲ
ಅವ್ಳು ನನಗಾಗೆ ಹುಟ್ಟವ್ಳೇನೋ
ಅದಕ್ಕಿಂಗೆ ಮಾಡವ್ಳೇನೋ
ತಿಕ್ಲಲ್ಲಿ ತೇಲ್ದಂಗಾಯ್ತಲ್ಲ
ಅವಳ್ನ ನೋಡದೆ ನಾ ಇರೋಕಾಗ್ತಿಲ್ಲ
ಜಿಂಕೆಮರೀನ ನೀ ಜಿಂಕೆಮರೀನ, ನೀ ಜಿಂಕೆಮರೀನ ನೀ ಜಿಂಕೆ ಜಿಂಕೆ ಮರೀನ
ಯಾರೂ ಬೇಡ
ಏನು ಬೇಡ
ನೀನಿದ್ರೆ ಲೋಕ ಬೇಡ
ಭೂಮಿ ಮೇಲೆ ನಾನಿಲ್ಲ
ಮನ್ಸು ಕೈಗೆ ಸಿಕ್ತಿಲ್ಲ
ನೋಡ್ತಾಳವಳು ನನ್ನೇ ಕಡ್ತಾಳವಳು
ಹೇ ಮುದ್ದು ಮಲ್ಲೆ
ಹೇ ನೀ ಮುದ್ದು ಮುದ್ದು ಜಲ್ಲೆ
ಜಿಂಕೆಮರೀನ ನೀ ಜಿಂಕೆಮರೀನ, ನೀ ಜಿಂಕೆಮರೀನ ನೀ ಜಿಂಕೆ ಜಿಂಕೆ ಮರೀನ....

Thursday, 30 August 2012

ninna mareyalaare - naa ninna mareyalaare ...

ಚಿತ್ರ: ನಾ ನಿನ್ನ ಮರೆಯಲಾರೆ
ಹಾಡಿದವರು: ರಾಜ್ ಕುಮಾರ್, ವಾಣಿ ಜಯರಾಂ
ನಟರು: ರಾಜ್ ಕುಮಾರ್, lakshmi

ನಿನ್ನ ಮರೆಯಲಾರೆ, ನಾ ನಿನ್ನ ಮರೆಯಲಾರೆ
ಎಂದೆಂದೂ ನಿನ್ನ ಬಿಡಲಾರೆ ಚಿನ್ನ ನೀನೆ ಪ್ರಾಣ ನನ್ನಾಣೆಗೂ

ಜೊತೆಗೆ ನೀನು ಸೇರಿ ಬರುತಿರೆ ಜಗವ ಮೆಟ್ಟಿ ನಾ ನಿಲ್ಲುವೆ
ಒಲಿದ ನೀನು ನಕ್ಕು ನಲಿದರೆ ಏನೇ ಬರಲಿ ನಾ ಗೆಲ್ಲುವೆ
ಆಹಾ ....ಲಾಲಾ.....ಲಾಲಾ....ತರರ.....
ಚೆಲುವೆ ನೀನು ಉಸಿರು ಉಸಿರಲಿ ಬೆರೆತು ಬದುಕು ಹೂವಾಗಿದೆ
ಎಂದು ಹೀಗೆ ಇರುವ ಬಯಕೆಯು ಮೂಡಿ ಮನಸು ತೇಲಾಡಿದೆ
ನಮ್ಮ ಬಾಳು, ಹಾಲು ಜೇನು .....

ನೂರು ಮಾತು ಏಕೆ ಒಲವಿಗೆ ನೋಟ ಒಂದೇ ಸಾಕಾಗಿದೆ
ಕಣ್ಣ ತುಂಬ ನೀನೆ ತುಂಬಿಹೆ ದಾರಿ ಕಾಣದಂತಾಗಿದೆ
ಆಹಾ ......
ಸಿಡಿಲೆ ಬರಲಿ ಊರೇ ಗುಡುಗಲಿ ದೂರ ಹೋಗೆ ನಾನೆಂದಿಗೂ
ಸಾವೇ ಬಂದು ನನ್ನ ಸೆಳೆದರು ನಿನ್ನ ಬಿಡೆನು ಎಂದೆಂದಿಗೂ
ನೋವು ನಲಿವು, ಎಲ್ಲ ಒಲವು.....