Friday 10 August 2012

ನಿನ್ನ ಕೆನ್ನೆ ನಕ್ಕಾಗ ನನ್ನ ನೆನೆ ಗೆಳತಿ!

ನಿನ್ನ ಕೆನ್ನೆ ನಕ್ಕಾಗ ನನ್ನ ನೆನೆ ಗೆಳತಿ
ನಿನ್ನ ಕೆನ್ನೆ ಹೊಳೆದಾಗ ನನ್ನ ನೆನೆ
ಅರಳಿ ನಿಂತ ಆ ಕೆನ್ನೆಗಳ ಚಿವುಟಿ
ಮರೆಯಾದವನು ನಾನೆ ತಾನೆ..!!

ನಿನ್ನ ತುಟಿಯ ತಳಮಳವ ಬಲ್ಲೆ
ಅದರ ವಿರಹ ವೇದನೆಯ ಬಲ್ಲೆನು
ವಿರಹದ ನೆರಳೊಳು ನರಳಿದ ನಿನ್ನಲಿ
ಸ್ವರ್ಗದ ಸ್ಪರ್ಶವ ತಂದವನು ನಾನೆ..!!

No comments:

Post a Comment