Wednesday 29 August 2012

ಕನಸಿನಂಗಡಿಯೊಡತಿ ನಾನು...

ಕನಸಿನಂಗಡಿಯೊಡತಿ ನಾನು
ನನಗೆ ಲಾಭ ನಷ್ಟವಿಲ್ಲ
ಬಿದ್ದರೆ ಒಡೆಯುವವು
ಬೆಳೆಸಿದರೆ ಬೆಳೆವವು
ಬಿದ್ದು- ಬೆಳೆಯುವ ನಡುವೆ ಲಾಭನಷ್ಟವೆಲ್ಲ


ಕೊಳುವಾಗ ಕನಸುಗಳ
ಬೆಲೆಯ ಕೇಳುವುದಿಲ್ಲ
ಮಾರಿಬಂದ ಲಾಭಕ್ಕೆ
ಮಾರುಹೋಗುವುದಿಲ್ಲ
ಕೊಡು-ಕೊಳುಗಳ ನಡುವೆ ಲಾಭನಷ್ಟವೆಲ್ಲ!!!!!!!!!!!1

No comments:

Post a Comment