Wednesday, 22 August 2012

ನನ್ನ ಕಂಗಳು ನನಗಿಷ್ಟ............

ನನ್ನ ಕಂಗಳು ನನಗಿಷ್ಟ
ನೀನದರಲಿ ತುಂಬಿರುವಾಗ
ನನ್ನ ಹೆಸರು ನನಗಿಷ್ಟ
ನೀನದನು ಉಚ್ಚರಿಸುವಾಗ
ನನ್ನ ಕೈಗಳು ನನಗಿಷ್ಟ
ನೀನದನು ಸ್ಪರ್ಶಿಸುವಾಗ
ನನ್ನ ಹೃದಯ ನನಗಿಷ್ಟ
ನೀನದರಲಿ ಕೂತಿರುವಾಗ
ನನಗೆ ನಾನೇ ಇಷ್ಟ
ನೀನೇ ನನ್ನವಳಾದಾಗ
ನಾನೇ ನಿನ್ನವನಾದಾಗ

,,,,,,,,,,,,,,,,,,,,,,,,,,,,,,,

No comments:

Post a Comment