Thursday 16 August 2012

ನಡೆದಂತೆ ನುಡಿನುಡಿದು.

ನಡೆದಂತೆ ನುಡಿನುಡಿದು
ನುಡಿದನಡೆ ಮರೆಯದಿರು

ನಡೆದಿರುವ ಗುಂಗಿನಲಿ, ಮುನ್ನಡೆಗೆ
ಹಿನ್ನಡೆಯ ಮುನ್ನುಡಿಯ ಬರೆಯದಿರು

"ಮುಂದೆ ನಡೆ - ಹಿಂದೆ ನುಡಿ"ಗಳನೇರಿಸಿ ಮುಡಿಗೆ
ನುಡಿದಂತೆ ನಡೆಯುತಿರು ನಡೆಸಲಾಗದ ನುಡಿಯದಿರು                  
.. ಸರ್ವಕಾಲದಲಿ..

No comments:

Post a Comment