Friday, 10 August 2012

ಕೆನ್ನೆ ಕಚ್ಚಿದ ಮಾಮ..!!

ಕೆನ್ನೆ ಕಚ್ಚಿದ ಕಾಣೆ ಅಮ್ಮ
ಕೆನ್ನೆ ಕಚ್ಚಿದ ಮಾಮ
ಮೆತ್ತಗೆ ನನ್ನೆಡೆ ಸನ್ನೆಯ ಮಾಡಿ
ಮಾತಿಗೆ ಕರೆದು ಮುತ್ತನು ಇಟ್ಟ


ನಿನ್ನ ತುಟಿಗಳೊ ಕಲ್ಲಿನ ಸಕ್ಕರೆ
ನನ ಬಾಯಿಗೆ ಬಹಳ ಅಕ್ಕರೆ
ಅಂತ ಹೇಳಿ ಮಾಮ
ಸೊಂಟ ಚಿವುಟಿ ಹಾರೇಬಿಟ್ಟ


ಜಾತ್ರೆ ಇಂದ ಜುಮಕಿ ತರ್ತೀನಿ
ಮುತ್ತಿನ ಸರ ಮಾಡಿಸಿ ಕೊಡ್ತೀನಿ
ಅಮ್ಮಂಗೆ ಏನು ಹೇಳಬೇಡ
ಅಂತ ಹೇಳ್ದಾ ಕಾಣೆ


ಲಂಗ ದಾವಣಿ ನಿಂಗೆ ಚಂದ ಕಾಣೆ
ಕಾಪಿ ತಗೊಂಡು ಬಾ ನನ್ನ ಕೊಣೆಗೆ
ಕೊಬ್ಬರಿ ಮಿಟಾಯಿ ನಿಂಗೆ ಇಷ್ಟ ಅಲ್ವ
ಅಳ್ ಮನೆ ಆಡ್ತ ಹಂಚ್ಕೊಂಡ್ ತಿನ್ನುವ
ಅಂತ ಹೇಳ್ದಾ ಮಾಮ


ಸಂಜೆ ಮತ್ತೆ ಬರ್ತೀನಿ ಅಂದ
ಸೌದೆ ಇಂದ ಸೊಂಟ ಮುರಿಯೆ
ಕಾಯಿಸೆ ಅಮ್ಮ ಮಗುಚೊ ಕೈಯಿ
ನಂಗೆ ಮುತ್ತಿಡ್ವಾಗ ನಿನ್ನ ಕೊಗ್ತೀನಿ
ಮಾಮನ ಮೊತಿಗೆ ಮೊರು ಬರೆ ಹಾಕೆ


ಕೆನ್ನೆ ಕಚ್ಚಿದ ಕಾಣೆ ಅಮ್ಮ
ಕೆನ್ನೆ ಕಚ್ಚಿದ ಮಾಮ
ಮೆತ್ತಗೆ ಮರೆಯಲಿ ಕರೆದು ನನ್ನ
ಮುತ್ತಿನ ಮೇಲೆ ಮುತ್ತನು ಇಟ್ಟ..!!

No comments:

Post a Comment