Thursday, 9 August 2012

.. ಇದು ಬದುಕಿನ ಕೊಂಡಿ ......

.. ಇದು ಬದುಕಿನ ಕೊಂಡಿ
ಜೀವ ಜೀವಂತಿಕೆಯ ಕಿಂಡಿ
ಯಾರೂ ಇಣುಕಬಹುದು ಇಲ್ಲಿ
ಕೊಂಕು ಕೆಣಕು ಇಲ್ಲಿಲ್ಲ
ನೋವು-ನಲಿವು, ಒಲವು-ಗೆಲುವು
ನಮ್ಮದು ನಿಮ್ಮದು ... ಎಲ್ಲರದು ಇಲ್ಲಿ ....

:ಸಿ = ಸಿಗೋಣ ?

:ಸಿ = ಸಿಗೋಣ
:ಮಸಿ = ಮತ್ತೆ ಸಿಗೋಣ
:ಕಕಾಂ = ಕರ್ಮಕಾಂಡ
:ಕಕಾಂಪ = ಕರ್ಮಕಾಂಡದ ಪರಮಾವಧಿ
:ಶಿಶಂ / :ಸಿಸಂ = ಶಿವನೆ ಶಂಭುಲಿಂಗ / ಸಿವನೆ ಸಂಭುಲಿಂಗ
:ಯಚಿ / :ಎಚಿ = ಯಕ್ಕಾಚಿಕ್ಕಿ / ಎಕ್ಕಾಚಿಕ್ಕಿ
:ನನಸು/ಸಾ = ನಕ್ಕು ನಕ್ಕು ಸುಸ್ತು/ಸಾಕಾಯ್ತು
:ಟೋಕೆ = ಟೋಪಿಗಳು ಕೆಳಗೆ
*ಚಿಂಚಿ* = ಚಿಂದಿ ಚಿತ್ರಾನ್ನ

ದೂರ ಸರಿದವಳು...

ಬರಡಾದ ಮನದಲ್ಲಿ ಬಾಂಧವ್ಯದ ಬೀಜ ಬಿತ್ತಿದವಳು ನೀನು
ಬರಿದಾದ ಹೃದಯದಲ್ಲಿ ಪ್ರೇಮದಲೆಯನೆಬ್ಬಿಸಿದವಳು ನೀನು
ಕಾರ್ಮೋಡ ಮುಸುಕಿದ್ದ ಬದುಕಿಗೆ ಬೆಳದಿಂಗಳ ಚಂದ್ರಮುಖಿ ನೀನು
ಬತ್ತಿ ಹೋಗಿದ್ದ ಆಸೆಗಳನ್ನೆಲ್ಲ ನೀರೆರೆದು ಪೋಷಿಸಿದವಳು ನೀನು
ನೊಂದ ಮನಸಿಗೆ ಸವಿ ಸಾಂತ್ವನದ ನುಡಿ ನೀನು
ಮಧುರ ನೆನಪನೆಲ್ಲ ಮರೆತು...
ನೀನಿಲ್ಲದ ಹೊರೆತು...
ಬದುಕು ಎಂದರೆ ಹೇಗೆ ಬದುಕಲಿ ನಾನು...?!
ಇದನ್ನೆಲ್ಲ ಮರೆತು ಹೇಗೆ ಬದುಕುವಿಯೇ ನೀನು...??!!

ಮುತ್ತು!!!!!!!!!!

ಅದೇನೋ ಗೊತ್ತಿಲ್ಲ... ಅದೊಂಥರಾ ಆಸೆ...
ಅದೊಂಥರಾ ಕುತೂಹಲ...
ಹೇಗಿರುತ್ತೋ ಅನುಭವಿಸಬೇಕು
ಅನ್ನೋ ಹಂಬಲ...
ಅಗಾಧವಾದ ಸೆಳೆತದ ಕಾತರ...
ಮೊದಲ ಸ್ಪರ್ಶಕೆ ಹಾತೊರೆಯುವ...
ಮಕರಂದ ಹೀರುವ...
ಸವಿಜೇನ ಸವಿಯುವ...
ಬಣ್ಣಿಸಲಾರದ ತಳಮಳ!!

ಕೋಡಗನ ಕೋಳಿ ನುಂಗಿತ್ತ ?

ಕೋಡಗನ ಕೋಳಿ ನುಂಗಿತ್ತ
ಕೇಳವ್ವ ತಂಗಿ
ಕೋಡಗನ ಕೋಳಿ ನುಂಗಿತ್ತ

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಿಲೆ ನುಂಗಿತ್ತ!

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತ!

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ ಮಣಿಯು ನುಂಗಿತ್ತ!

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕುಟ ತಿರುವೋ ಅಣ್ಣನನ್ನೆ ಮೇಳಿ ನುಂಗಿತ್ತ!

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯ ನುಂಗಿ
ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತ - ತಂಗಿ
ಕೋಡಗನ ಕೋಳಿ ನುಂಗಿತ್ತ!

ಕಂಪನಿಯ ಆಫರು ಲೆಟಾರ್

"sorry sir, my grand pa is not well you know?" ನಮಗೆ ಹೇಗೆ ಗೊತ್ತಿರಬೇಕು?!

"its ok, when can join Mr... "

"ಇಲ್ಲ ಸಾರ್ ನಂಗೆ ಈಗಲೇ ಹೇಳೋಕೆ ಆಗಲ್ಲ, ನಮ್ಮಜ್ಜನ ಪರಿಸ್ಥಿತಿ criticalಉ, ಹೇಳೋಕೆ ಆಗಲ್ಲ, ಇವತ್ತು ನಾಳೇ ಅನ್ನೋ ಹಾಗಿದೆ, ನಾನೊಬ್ಬನೇ ಮೊಮ್ಮಗ you know?"

ಅಲ್ಲಿಗೆ ಅವನ ಹಣೆಬರಹ ತಿಳಿದಂತೆ. ನಿಜವಾಗಿ ಏನಾಗಿರತ್ತೆ ಅಂತೀರಾ?
ಆ ಪುಣ್ಯಾತ್ಮ ನಮ್ಮ ಕಂಪನಿಯ ಆಫರು ಲೆಟರು ಹಿಡಕೊಂಡು ಮತ್ತೆ ಒಂದು ಇಪ್ಪತ್ತು ಇಂಟರ್ವ್ಯೂ ಅಟೆಂಡು ಮಾಡಿ,
"ನೋಡಿ ನಂಗೆ ಇವರು ಇಷ್ಟು ಕೊಡುತ್ತಾರಂತೆ ಸಂಬಳಾನ, ನೀವೆಷ್ಟು ಕೊಡುತ್ತೀರಿ ಅಂತ ಚೌಕಾಸಿ ಶುರು ಮಾಡಿರುತ್ತಾನೆ. ಎಲ್ಲೋ ಕೆಲಸವೂ ಗಿಟ್ಟಿರುತ್ತದೆ.

ಹುಡುಗ ಹುಡುಗ?

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ದುಮಾಡೊಕು ಕಂಜೂಸು ಬುದ್ದಿ ಬೇಕಾ?
ಹನಿಮೂನಲ್ಲು ದ್ಯಾನ ಏಕಾಂತದಲ್ಲೂ ಮೌನ
ಏನೊ ಚಂದ ಹತ್ತಿರ ಬಾ ಹುಡುಗ.....

ಮುತ್ತಿನ ಹೊದಿಕೆ ಸುತ್ತಲು ಹೊದಿಸಿ ಅಪ್ಪಿಕೊ ಬಾರೋ ನನ್ನನ್ನ
ಚುಮುಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೊ ನನ್ನನ್ನ
ಕತ್ತಲೆ ಒಳಗೆ ಕಣ್ಣಾಮುಚ್ಚಾಲೆ ಅಪ್ಪಿಕೊ ಬಾರೊ ನನ್ನನ್ನ
ಉರುಳಿಸು ಬಾರೊ ಕೆರಳಿಸು ಬಾರೊ ಅರಳಿಸು ಬಾರೊ ನನ್ನನ್ನ ಹುಡುಗ.....